ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ
ನೆತ್ತರು ಹರಿದಾಗ ಹಣ ತೆತ್ತರೂ ಬಾರದ ಪರಿಸ್ಥಿತಿ ಎದುರಾದಾಗ ಭಗವಂತ ನೀನೆ ನನ್ನ ಶಕ್ತಿ ಎಂದು ಮುಂದುವರೆಯ ಬೇಕಾದ ಅನಿವಾರ್ಯತೆ ತಲೆದೂರುತ್ತದೆ…. ಬಳಲಿ ಬೆಂಡಾಗಿ ಬಿಡಿಸಲಾಗದ ಕಗ್ಗಂಟಾಗಿ ಅಸಹಾಯಕನಾಗಿ ಬಿಡುವ ಸನ್ನಿವೇಶಗಳಿಗೇನು ಕೊರತೆಯಿಲ್ಲ. ಪುರಾತನ ಕಾಲದಿಂದಲೂ ನಮ್ಮ ಪರಿಸರದಲ್ಲಿರುವ ಪ್ರತಿಯೊಂದು ನೈಸರ್ಗಿಕ ವಿಷಯಗಳನ್ನು ದೈವೀ ಭಾವನೆಯಿಂದ ನೋಡುತ್ತ ಬಂದಂತಹ ನಮ್ಮ ಭಾರತೀಯರಿಗೆ ಅಗ್ನಿ, ಜಲ, ವಾಯು, ಆಕಾಶ, ಭೂಮಿಯು ಆರೋಗ್ಯದಾಯಿನಿ ಎಂಬುದು ಹೊಸತೇನಲ್ಲ. ಆದರೂ ಸದ್ಬಳಕೆಯ ಅರಿವು ಕಡಿಮೆಯೇನೋ ಎನ್ನಿಸುವುದು. ನಾಟಿ ಔಷಧೀಯ ಪದ್ಧತಿಯು ಅಲ್ಲಲ್ಲಿ ಬಳಕೆಯಲ್ಲಿದ್ದರೂ […]